ಜಟ್ಲೆಂಡ್

ಯೂರೋಪಿನಲ್ಲಿ ಪಶ್ಚಿಮ ಜರ್ಮನಿಯಿಂದ ಉತ್ತರಕ್ಕೆ ಚಾಚಿ, ಉತ್ತರ ಸಮುದ್ರ ಮತ್ತು ಕ್ಯಾಟಿಗ್ಯಾವ್ ಕಡಲತೋಳಿನ ನಡುವೆ ವಿಸ್ತರಿಸಿರುವ ಪರ್ಯಾಯದ್ವೀಪ, ಡೇನಿಷ್ ಭೂಪ್ರದೇಶ, ಷ್ಲೆಸ್‍ವಿಗ್-ಹೋಲ್ಸ್ಟೈನ್ ರಾಜ್ಯ, ಪಶ್ಚಿಮ ಜರ್ಮನಿಗಳನ್ನೊಳಗೊಂಡಿದೆ. ರಾಜಕೀಯವಾಗಿ ಡೇನಿಷ್ ಭೂಪ್ರದೇಶಕ್ಕೆ ಮಾತ್ರ ಈ ಹೆಸರು ಅನ್ವಯಿಸುತ್ತದೆ. ಲಿಮ್ ಫೋರ್ಡ್ ಉತ್ತರ ದ್ವೀಪಗಳನ್ನು ಒಳಗೊಳ್ಳುತ್ತದೆ. ಒಂದನೆಯ ಮಹಾಯುದ್ಧದ ಸಮಯದಲ್ಲಿ ಈ ಪ್ರದೇಶದ ಪಶ್ಚಿಮ ಕರಾವಳಿಯ ಬಳಿ ನಡೆದ ನೌಕಾಕದನ ಜಟ್ಲೆಂಡ್ ಕದನ (ನೋಡಿ- ಜಟ್ಲೆಂಡ್-ಕದನ) ಎಂದು ಪ್ರಸಿದ್ಧವಾಗಿದೆ. 

(ಎಸ್.ಎನ್.ಎ.ಆರ್.ಇ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ